Tuesday, March 2, 2010

ನಿನಗಾಗಿ ಕಾದಿರುವೆ


ಗೆಳತೀ, ನನ್ನೊಳಗಿನ ಮನದಳಲನ್ನು ನಿನ್ಮುಂದೆ ತೆರೆದಿಡುತ್ತಿರುವೆನು,ಆಲಿಸೆಯಾ.............ಪ್ರಿಯ ಗೆಳತಿ ನೆನಪಿದೆಯಾ..ನೀನಂದು ಏನು ಹೇಳಿದ್ದೆ, ಪ್ರೀತಿಗಿಂತ ಗೆಳೆತನ ದೊಡ್ಡದೆಂದಲ್ಲವೇ?.....ಆದರೆ ಈಗೇಕೆ ಆ ಮಾತು ಸೆರೆಯಲ್ಲಿ ಕೊಚ್ಚಿಹೋಯಿತು. ನಿನಗೀಗ ಪ್ರೀತಿಯೇ ದೊಡ್ಡದಾಯಿತೇ?......ನಾ ಕಳೆಯುತ್ತಿರುವ ಪ್ರತಿ ಗಳಿಗೆಯಲ್ಲೂ ನಿನ್ನ ಕಳೆದಕೊಂಡ ನೋವನ್ನು ಅನುಭವಿಸುತ್ತಿರುವೆನು, ಇದು ನಿನ್ನ ಅರಿವಿಗೆ ಬಾರದೇ ಹೋಯಿತೇ? ನೀನು ಹೇಗೆ ಮರೆತುಬಿಟ್ಟೆ ನಮ್ಮ ಒಡನಾಟವ, ನಮ್ಮ ಚೆಲ್ಲಾಟವ, ನಾನು, ನೀನು ಮತ್ತೆ ನಿನ್ನವನಾಗಿದ್ದ ಗೆಳೆಯ, ನಮ್ಮೂವರನ್ನು ನೋಡಿ ಎಷ್ಟೊಂದು ಮಂದಿ ಹೊಟ್ಟೆಉರಿ ಪಡೆದಿಲ್ಲ.ಆದರೆ ಈಗ.....ಆ ದಿನ ನೀ ನನ್ನಲ್ಲಿ ಹೇಳಿದ್ದೆ ಯಾವುದೇ ಸಂದರ್ಭ ಬರಲಿ ನಾ ಪ್ರೀತಿಯನ್ನಾದರೂ ಬಿಟ್ಟುಕೊಡುವೆ ನಿನ್ನ ಗೆಳೆತನವನ್ನು ಬಿಡಲಾರೆನೆಂದು ಅದೆಲ್ಲವನ್ನು ಹುಸಿಮಾಡಿಬಿಟ್ಟೆ ನೀನು, ನಾ ನಿನ್ನಲ್ಲಿ ಹೇಳದ ನೋವ್ಯಾವುದು, ಹೇಳದ ಕಥೆ ಯಾವುದು, ವ್ಯಥೆ ಯಾವುದು. ಬಾಲ್ಯದಿಂದಲೇ ಯಾರಿಂದಲೂ ಸಿಗದ ಪ್ರೀತಿಯ ರಸಗಡಲನ್ನೇ ನೀ ನನಗೆ ಸುರುಸಿದೆ, ನನ್ನ ಪ್ರೀತಿಯೆಲ್ಲವನ್ನೂ ನಿನಗೆ ಧಾರೆಯೆರೆದೆ ಆದರೂ ನನ್ನ ದೂರಮಾಡಿಬಿಟ್ಟೆ. ಗೆಳತಿ ನಾ ನಿನ್ನಾತನ ಬಗ್ಗೆ ಕೇಳಿ ಬಂದ ಮಾತನ್ನು ಹೇಳಿದಕ್ಕಲ್ಲವೇ ನೀ ನನ್ನಿಂದ ದೂರ ಸರಿದದ್ದು,ನಿನ್ನ ಶ್ರೇಯಸ್ಸನ್ನು ಬಯಸಿದ್ದಕ್ಕೆ ನೀ ನೀಡಿದ ಉಡುಗೋರೆ ಇದೆನಾ?........ನಿನ್ನೊಂದಿಗೆ ಕಳೆದ ಆ ದಿನಗಳು ಎಷ್ಟೊಂದು ಮಧುರ. ಎಂತಹ ವಿಪಯರ್ಾಸ ಅದೆಲ್ಲವೂ ಈಗ ಬರೀ ಮೆಲುಕು ಹಾಕಲು ಸೀಮಿತವಾಗಿಹೋಯಿತು. ನಾನೆಂತ ದುರದೃಷ್ಟವಂತೆ ನೀ ನೀಡಿದ ಆ ಪ್ರೀತಿಯ ಸವಿಯನ್ನು ನನ್ನ ಎದೆಯಲ್ಲಿ ಬಚ್ಚಿಟ್ಟು ಪ್ರತಿಕ್ಷಣವೂ ಅದರ ಸ್ವಾದವನ್ನು ನನ್ನ ಜೀವನದುದ್ದಕ್ಕೂ ಅಸ್ವಾದಿಸಬೇಕೆಂದಿದ್ದೆ ಆದರೆ ಅದು ಕ್ಷಣಿಕವಾದ ಪ್ರೀತಿಯಾಯಿತು. ಗೆಳತಿ ನಿನಗಾದರೂ ನಿನ್ನವನಿದ್ದಾನೆ ಆದರೆ ನಾನು ಏಕಾಂಗಿ, ನಾಲ್ಕು ಗೋಡೆಗಳ ಮಧ್ಯೆ ಕತ್ತಲಲ್ಲಿ ನಿನ್ನೊಂದಿಗೆ ಕಳೆದ ಆ ಸವಿದಿನಗಳನ್ನು ನೆನೆಯತ್ತಾ ಯಾರಲ್ಲೂ ನೋವ ಹೇಳಿಕೊಳ್ಳಲಾಗದೆ ಕಣ್ಣೀರು ಸುರಿಸುತ್ತಿರುವೆನು, ನೋವಿನ ಭಾರವನ್ನು ಕಡಿಮೆ ಮಡಲು ಯತ್ನಿಸುತ್ತಿರುವೆನು, ಇಲ್ಲ ಗೆಳತಿ ನನ್ನಿಂದಾಗದು, ನಿನ್ನ ಪ್ರೀತಿಗಾಗಿ ಹಾತೊರೆಯುತ್ತಿರುವೆನು..ಬಾ ಗೆಳತಿ ಮತ್ತೆ ನನ್ನ ಆ ಪ್ರೀತಿಯ ಕಡಲಿನಲ್ಲಿ ತೇಲಿಸು...ಕಳೆದ ಸವಿ ಕ್ಷಣಗಳನ್ನು ಮತ್ತೆ ಉಣಬಡಿಸು..ನಿನಗಾಗಿ ಕಾದಿರುವೆ ನಿನ್ನವಳೇ ಆದ ಈ ಬಡ ಗೆಳತಿ " ಮುನ್ನು"

Monday, February 22, 2010

ನೀನೆಂದು ಬರುವೆ



ಕಣ್ಣರೆಪ್ಪೆಗಳಡಿ ಕಾದು ಕುಳಿತಿದೆ ಸಾವು
ಕಣ್ಗೊಂಬೆಯಲ್ಲಿರುವ ನೀನು
ಓ ಗೆಳೆಯಾ,ಕಾಲ ಜಾರಿ ಹೋಗುವ ಮುನ್ನ
ಕಣ್ಣೆರಡ ಮಿಟುಕಿಸದೆ ಕಾದಿರುವೆ
ನೀನೆಂದು ಬರುವೆ...........

ಸವಿ ನೆನಪು



ನಿನ್ನೊಂದಿಗೆ ಕಳೆದ ಆ ಸವಿನೆನಪು
ಈ ತನಕ ಕ್ಷಣ ಬಿಡದೆ ಕೊರೆಯುವುದೆಂದು
ತಿಳಿದಿರಲಿಲ್ಲ ಗೆಳಯಾ..........
ಕೈ ಜಾರಿದ ಮುತ್ತಿನ ಬೆಲೆಯ,
ಬಾಯಿ ತಪ್ಪಿದ ತುತ್ತಿನ ರುಚಿಯ,
ನಾನರಿತೆ ನೀ ನನ್ನ ಬಿಟ್ಟು ಹೋದ ಮೇಲೆ.

ಪ್ರೀತಿ.....




ಏನೂ ಅರಿಯದ ನನ್ನ ಜೀವನದ,
ಆ ಗಳಿಗೆಯಲ್ಲಿ ನಡೆದ ಕಹಿಕ್ಷಣದಿಂದ,
ನಾ ಪಣ ತೊಟ್ಟಿದ್ದೆ ನನ್ನದೇ ಹಿತದಿಂದ,
ಪ್ರೀತಿಯನ್ನರಸಿ ಹೋಗಲಾರೆನೆಂದು,
ಅದರ ಬಲೆಗೆ ಬೀಳಲಾರೆನೆಂದು,
ಆದರೆ, ಓ ಪ್ರಿಯಾ.................
ನೀ ನನ್ನ ಮನ ಸೋಲಿಸಿಬಟ್ಟೆ,
ಹತ್ತಿರ ಬಂದ ನಿನ್ನ ದೂರ ಮಾಡಬಯಸಿದೆ,
ಪ್ರೀತಿ ಎರೆಯಲು ಬಂದ ನಿನ್ನ ಸಂಶಯಿಸಿದೆ,
ನಿನ್ನಲ್ಲೇ ಹೇಳಿದೆ ಪ್ರೀತಿ ಲೊಟ್ಟೆಯ ಪರದೆ,
ಬರಿ ನೋವಿನ ವಿಷವನ್ನುಣಿಸುವುದೆಂದೆ,
ನೀಲಾಗಸವನ್ನ ತೋರಿಸಿ ಕೂಪಕ್ಕೆ ನೂಕುವುದೆಂದೆ,
ಆದರೆ, ಓ ಪ್ರಿಯಾ.................
ನೀ ನನ್ನ ಮನ ಸೋಲಿಸಿಬಟ್ಟೆ,
ಹುಸಿ ಪ್ರೀತಿಯ ಮೋಸವನ್ನರಿತ ನನ್ನೆದೆ
ತುಂಬಾ ಹಸಿ ಪ್ರೀತಿಯ ರಸವನ್ನೆರೆದೆ,
ನೋವಿನ ಬೇಗೆಯಲ್ಲಿ ಬೆಂದ ಈ ಮನಕೆ
ಸುಖದ ಸಿಹಿ ಮಳೆಯನ್ನೇ ಸುರಿದೆ,
ಸಿಹಿ ಕಡಲಿನಲಿ ಹೃದಯಾನ ತೇಲಿಸಿದೆ,
ಆದರೆ, ಓ ಪ್ರಿಯಾ.................
ನೀ ನನ್ನ ಮನ ಸೋಲಿಸಿಬಿಟ್ಟೆ .

ಬಾಲ್ಯ-ಹರೆಯ-ಮುದಿತನ


ಬಾಲ್ಯ: ಆಡುತ್ತಾ ಚೆಲ್ಲಾಟವಾಡುತ್ತಾ
ಪುಟ್ಟ ಹೆಜ್ಜೆಗಳನಿಡುತ್ತಾ
ಆಟ-ಪಾಟವ ನೋಡುತ್ತಾ
ಕೆಲ ದಶಕಗಳ ಕಳೆವಾಗ
ಮೆಲ್ಲನುಸಿರಿತು "ಹರೆಯ"
ನಾ ನಿನ್ನ ಬಳಿ ಬರುವೆನೆಂದು
ಹರೆಯ:ಅರಸಿ ಬೆಳೆಸಿ ಉಳಿಸಿ
ಮತ್ತೆ ಕೆಲವು ಶತಕಗಳ ಸವೆಸಿ
ಇಟ್ಟ ಹೆಜ್ಜೆಯ ಹಿಂದೆಗೆಯಲಾರೆನೆನ್ನುವ
ದಿಟ್ಟ ನಡೆಗೆ ವಿಶ್ರಾಂತಿ ಇಲ್ಲಿಹುದೆನ್ನುತ
ಕೂಗಿ ಕರೆಯಿತು "ಮುದಿತನ"
ಮುದಿತನ: ಶಾಂತಿ, ವೀರಶಾಂತಿ ಇಲ್ಲಿಹುದು
ಮೇಲೆರಲಾರೆ ಹಿಂದೆ ಸರಿಯಲಾರೆ
ಯಾರ ಕೂಗಲಿ ನಾನು
ಯಾರು ಕರೆಯುವರು ನನ್ನ
ಇಹಲೋಕವಲ್ಲದೆ " ಅಲ್ಲಿಹುದು"
ಆತ್ಮ ಶಾಂತಿಯ ನೆಲ.