
ಏನೂ ಅರಿಯದ ನನ್ನ ಜೀವನದ,
ಆ ಗಳಿಗೆಯಲ್ಲಿ ನಡೆದ ಕಹಿಕ್ಷಣದಿಂದ,
ನಾ ಪಣ ತೊಟ್ಟಿದ್ದೆ ನನ್ನದೇ ಹಿತದಿಂದ,
ಪ್ರೀತಿಯನ್ನರಸಿ ಹೋಗಲಾರೆನೆಂದು,
ಅದರ ಬಲೆಗೆ ಬೀಳಲಾರೆನೆಂದು,
ಆದರೆ, ಓ ಪ್ರಿಯಾ.................
ನೀ ನನ್ನ ಮನ ಸೋಲಿಸಿಬಟ್ಟೆ,
ಹತ್ತಿರ ಬಂದ ನಿನ್ನ ದೂರ ಮಾಡಬಯಸಿದೆ,
ಪ್ರೀತಿ ಎರೆಯಲು ಬಂದ ನಿನ್ನ ಸಂಶಯಿಸಿದೆ,
ನಿನ್ನಲ್ಲೇ ಹೇಳಿದೆ ಪ್ರೀತಿ ಲೊಟ್ಟೆಯ ಪರದೆ,
ಬರಿ ನೋವಿನ ವಿಷವನ್ನುಣಿಸುವುದೆಂದೆ,
ನೀಲಾಗಸವನ್ನ ತೋರಿಸಿ ಕೂಪಕ್ಕೆ ನೂಕುವುದೆಂದೆ,
ಆದರೆ, ಓ ಪ್ರಿಯಾ.................
ನೀ ನನ್ನ ಮನ ಸೋಲಿಸಿಬಟ್ಟೆ,
ಹುಸಿ ಪ್ರೀತಿಯ ಮೋಸವನ್ನರಿತ ನನ್ನೆದೆ
ತುಂಬಾ ಹಸಿ ಪ್ರೀತಿಯ ರಸವನ್ನೆರೆದೆ,
ನೋವಿನ ಬೇಗೆಯಲ್ಲಿ ಬೆಂದ ಈ ಮನಕೆ
ಸುಖದ ಸಿಹಿ ಮಳೆಯನ್ನೇ ಸುರಿದೆ,
ಸಿಹಿ ಕಡಲಿನಲಿ ಹೃದಯಾನ ತೇಲಿಸಿದೆ,
ಆದರೆ, ಓ ಪ್ರಿಯಾ.................
ನೀ ನನ್ನ ಮನ ಸೋಲಿಸಿಬಿಟ್ಟೆ .